Home / ಬೆಳಗಾವಿ / ಅರೆ ಬೆತ್ತಲೆ ಪ್ರತಿಭಟನೆ. ಅಂಬೇಡ್ಕರ್ ಭವನ ವಿಳ...

ಅರೆ ಬೆತ್ತಲೆ ಪ್ರತಿಭಟನೆ. ಅಂಬೇಡ್ಕರ್ ಭವನ ವಿಳಂಬ- ಪ್ರಹ್ಲಾದ ಜೋಶಿ ಮಧ್ಯಸ್ಥಿಕೆಗೆ ದಲಿತರ ಆಗ್ರಹ

E
By ETV 24X7 Chief Admin
October 6, 2026 341 views 0 comments Edit Article
ಅರೆ ಬೆತ್ತಲೆ ಪ್ರತಿಭಟನೆ. ಅಂಬೇಡ್ಕರ್ ಭವನ ವಿಳಂಬ- ಪ್ರಹ್ಲಾದ ಜೋಶಿ ಮಧ್ಯಸ್ಥಿಕೆಗೆ ದಲಿತರ ಆಗ್ರಹ

ಹುಬ್ಬಳ್ಳಿ-ಧಾರವಾಡದ ವಾರ್ಡ್ 68ರ ವಾರ್ಡನಲ್ಲಿ ಬಡ ದಲಿತ ಚಲವಾದಿ ಸಮುದಾಯಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನೀಡಿರುವ 16 ಲಕ್ಷ ರೂಪಾಯಿ ಅನುದಾನದ ಡಾ. ಬಿ.ಆರ್. ಅಂಬೇಡ್ಕರ್ ಸಾಂಸ್ಕೃತಿಕ ಭವನ ಕಾಮಗಾರಿ ಒಂದು ವರ್ಷ ಕಳೆದರೂ ಪ್ರಾರಂಭವಾಗದ್ದನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿದ್ಧಾರ್ಥ ಸೇವಾ ಸಂಘ ಮತ್ತು ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಧರಣಿ, ಇಂದು ಅರೆ ಬೆತ್ತಲೆ ಪ್ರತಿಭಟನೆಯ ಮೂಲಕ ಮಹಾನಗರ ಪಾಲಿಕೆ ಎದುರು ನಡೆಸಲಾಯಿತು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಅರೆ ಬೆತ್ತಲೆ ಪ್ರತಿಭಟನೆ. ಅಂಬೇಡ್ಕರ್ ಭವನ ವಿಳಂಬ- ಪ್ರಹ್ಲಾದ ಜೋಶಿ ಮಧ್ಯಸ್ಥಿಕೆಗೆ ದಲಿತರ ಆಗ್ರಹ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು ಮತ್ತು ಸಚಿವ ಪ್ರಹ್ಲಾದ್ ಜೋಶಿ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಈ ಒಂದು ಪ್ರತಿಭಟನೆಯಲ್ಲಿ ಸೇವಾ ಸಿದ್ಧಾರ್ಥ ಸೇವಾ ಸಂಘದ ಅಧ್ಯಕ್ಷರಾದಂತಹ ವಿರುಪಾಕ್ಷಿ ಚಲವಾದಿ ಹಾಗೂ ಕರ್ನಾಟಕ ದಲಿತ ವಿಮೋಚನ ಸಮಿತಿಯ ರಾಜ್ಯಾಧ್ಯಕ್ಷರು ಸುರೇಶ್ ಆರ್. ಖಾನಾಪುರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕೆಂಚಪ್ಪ ಬ. ಮಲ್ಲಮ್ಮನವರು, ಹುಬ್ಬಳ್ಳಿ ಶಹರ್ ಅಧ್ಯಕ್ಷರಾದ ಶ್ರೀದರ್ ಕಂದಗಲ್, ಗುರುನಾಥ್ ಕ್ವಾಟೀ, ಕೋಟೇಶ್ ಬುಳ್ಳಾಪುರ್, ರುದ್ರವ್ವ ಚಲವಾದಿ, ಇತರರು ಇದ್ದರು.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.