Home / ಕ್ರೈಂ / ತಿಮ್ಮಸಾಗರದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ! ಆಕಾ...

ತಿಮ್ಮಸಾಗರದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ! ಆಕಾಶ ಬುಟ್ಟಿಯಿಂದಲೇ ಅನಾಹುತ? ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮನವಿ!

E
By ETV 24X7 Chief Admin
November 10, 2026 276 views 0 comments Edit Article
ತಿಮ್ಮಸಾಗರದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ! ಆಕಾಶ ಬುಟ್ಟಿಯಿಂದಲೇ ಅನಾಹುತ? ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮನವಿ!

ಹಳೆ ಹುಬ್ಬಳ್ಳಿಯ ತಿಮ್ಮಸಾಗರ, ನೇಕಾರನಗರ ಹತ್ತಿರದ ಸರ್ವೆ ನಂಬರ್ 14/2 ರ ಜಮೀನಿನಲ್ಲಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದೆ.

ರಾತ್ರಿ ವೇಳೆ ಬೆಂಕಿ ಹೊತ್ತಿ ಉರಿದಿದ್ದು, ಸ್ಥಳೀಯರು ಬೆಂಕಿ ಆರಿಸಲು ಹರಸಾಹಸ ಪಟ್ಟಿದ್ದಾರೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ತಿಮ್ಮಸಾಗರದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ! ಆಕಾಶ ಬುಟ್ಟಿಯಿಂದಲೇ ಅನಾಹುತ? ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮನವಿ!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ದೀಪಾವಳಿಯ ವೇಳೆ ಸಾರ್ವಜನಿಕರು ಬೆಂಕಿ ಹಚ್ಚಿ ಆಕಾಶ ಬುಟ್ಟಿಯನ್ನು ಆಕಾಶದಲ್ಲಿ ಹಾರಲು ಬಿಡುತ್ತಾರೆ. ಆದ್ರೆ ಅದರಿಂದ ಅನಾಹುತ ಆಗುತ್ತಿವೆ. ಹೊಲದಲ್ಲಿ ಬಿದ್ದ ಆಕಾಶ ಬುಟ್ಟಿಯಿಂದಲೇ ಈ ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದಿದೆ ಎಂದು ಶಂಕಿಸಲಾಗಿದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಭೂಷಣ್ ಬೊರಸೆ ಅವರು ಮನವಿ ಮಾಡಿದ್ದಾರೆ - ನಾಗರಿಕರು ಸ್ಕೈ ಲ್ಯಾಂಟರ್ನ್ ಬಳಸಬೇಡಿ, ಇವು ಕೃಷಿ ಭೂಮಿಗಳಲ್ಲಿ ಹಾಗೂ ವಸತಿ ಪ್ರದೇಶಗಳಲ್ಲಿ ಬೆಂಕಿ ಅಪಾಯ ಉಂಟುಮಾಡುತ್ತಿವೆ.

ಹಬ್ಬ ಆಚರಿಸಿ, ಆದರೆ ಬೇರೆಯವರ ಬೆಳೆ, ಮನೆಗೆ ತೊಂದರೆ ಆಗದಂತೆ ನೋಡಿಕೊಳ್ಳಿ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.