ಹುಬ್ಬಳ್ಳಿಯ ಗಬ್ಬೂರು ಬಳಿಯ ಪ್ರಸಿದ್ಧ ದಾದಾವಾಡಿ ಶ್ರೀ ಆದಿನಾಥ ಜೈನ ಮಂದಿರದಲ್ಲಿ ತಡರಾತ್ರಿ ದರೋಡೆ ನಡೆದಿದೆ.
ಮೂರು ಜನ ಮುಸುಕುಧಾರಿಗಳು ರಾಡ್ ಬಳಸಿ ಮಂದಿರದ ದ್ವಾರ ಮುರಿದು ಒಳನುಗ್ಗಿದ್ದಾರೆ. ದೇವರ ತಲೆಯ ಮೇಲಿದ್ದ ಚಿನ್ನದ ಕಿರೀಟ, ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ಹುಂಡಿಯಲ್ಲಿದ್ದ ನಗದು ಸೇರಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳತನದ ವೇಳೆ ದೇವರ ಪವಿತ್ರ ಮೂರ್ತಿಗೂ ಹಾನಿ ಮಾಡಿದ್ದಾರೆ.
ಅಚ್ಚರಿ ಅಂದ್ರೆ, ಇದೇ ಮಂದಿರದಲ್ಲಿ ಇದು ಮೂರನೇ ಬಾರಿ ನಡೆಯುತ್ತಿರುವ ಕಳ್ಳತನ. 2025ರಲ್ಲೂ ಇದೇ ಮಂದಿರದಲ್ಲಿ ದರೋಡೆ ನಡೆದಿತ್ತು, ಆಗ ಗುಜರಾತ್ ಮೂಲದ ಆರೋಪಿಗಳಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದರು.
ಮೂರನೇ ಬಾರಿ ಕಳ್ಳತನ ಆದ್ರೂ ಮಂದಿರಕ್ಕೆ ಸರಿಯಾದ ಭದ್ರತಾ ಸಿಬ್ಬಂದಿ ಇಲ್ಲ, ಭದ್ರತೆ ಬಗ್ಗೆ ನಿರ್ಲಕ್ಷ್ಯ ಎದ್ದು ಕಾಣ್ತಿದೆ ಅಂತ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ CCTV ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳಿಗಾಗಿ ತೀವ್ರ ಶೋಧ ನಡೆದಿದೆ.ಜೈನ ಮಂದಿರಗಳ ಸರಣಿ ಕಳ್ಳತನ ಹುಬ್ಬಳ್ಳಿ ಜನರಲ್ಲಿ ಆತಂಕ ಮೂಡಿಸಿದೆ.