Home / ಹುಬ್ಬಳ್ಳಿ-ಧಾರವಾಡ / ಹುಬ್ಬಳ್ಳಿ ನವರಾತ್ರಿ ಹಬ್ಬದ ಸಂಭ್ರಮಕ್ಕೆ ಶಿಲ...

ಹುಬ್ಬಳ್ಳಿ ನವರಾತ್ರಿ ಹಬ್ಬದ ಸಂಭ್ರಮಕ್ಕೆ ಶಿಲ್ಪಾ ಶೆಟ್ಟಿ ಮೆಚ್ಚುಗೆ - ಹುಬ್ಬಳ್ಳಿಯ ಜನರ ಜೋಶ್ ಸೂಪರ್

E
By ETV 24X7 Chief Admin
October 19, 2026 307 views 0 comments Edit Article
ಹುಬ್ಬಳ್ಳಿ  ನವರಾತ್ರಿ ಹಬ್ಬದ ಸಂಭ್ರಮಕ್ಕೆ ಶಿಲ್ಪಾ ಶೆಟ್ಟಿ ಮೆಚ್ಚುಗೆ - ಹುಬ್ಬಳ್ಳಿಯ ಜನರ ಜೋಶ್ ಸೂಪರ್

ಶಿಲ್ಪಾ ಶೆಟ್ಟಿ: ನಾನು ಕರ್ನಾಟಕದ ಹೆಣ್ಣುಮಗಳು ಎಂಬ ಹೆಮ್ಮೆ ಇದೆ ಹುಬ್ಬಳ್ಳಿಗೆ ಮೊದಲ ಬಾರಿಗೆ ಭೇಟಿ ನೀಡಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಹುಬ್ಬಳ್ಳಿಯ ಹಬ್ಬದ ಸಂಭ್ರಮ, ಜನರ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಜನರ ಜೋಶ್ ಸೂಪರ್ ಎಂದ ನಟಿ, ಗರ್ಬಾ ನೃತ್ಯ ಮಾಡಿ ಸಂಭ್ರಮಿಸಿದರು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿ ಹಬ್ಬದ ಸಂಭ್ರಮಕ್ಕೆ ಶಿಲ್ಪಾ ಶೆಟ್ಟಿ ಮೆಚ್ಚುಗೆ - ಹುಬ್ಬಳ್ಳಿಯ ಜನರ ಜೋಶ್ ಸೂಪರ್"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ನಾನು ಕರ್ನಾಟಕದ ಹೆಣ್ಣುಮಗಳು, ಬಂಟ ಸಮುದಾಯದವಳು, ಕರ್ನಾಟಕದ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇದೆ. ನೃತ್ಯಕ್ಕೆ ಭಾಷೆ ಇಲ್ಲ, ಅದೊಂದು ಭಾವನೆ. ದೇವರಿಗಾಗಿ ಮನಸ್ಸು ತುಂಬಿ ನೃತ್ಯ ಮಾಡಬೇಕು. ನಾನು ದೇವಿಯ ಪರಮ ಭಕ್ತೆ" ಎಂದರು.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಕಾಂತಾರ ಸೇರಿದಂತೆ ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಬೆಳವಣಿಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಲ್ಪಾ ಶೆಟ್ಟಿ, ನಟ ಯಶ್ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೆಸರು ತಂದುಕೊಟ್ಟಿದ್ದಾರೆ ಎಂದರು. ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೆ ಇಲ್ಲ ಎನ್ನುವುದಿಲ್ಲ ಎಂದ ನಟಿ, ಮುಂಬರುವ ರಾಮಾಯಣ ಚಿತ್ರತಂಡಕ್ಕೆ ಶುಭ ಹಾರೈಸಿದರು.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.