Home / ಕ್ರೈಂ / 2020ರ ಫ್ರೂಟ್ ಇರ್ಫಾನ್ ಕೊ***ಲೆ ಕೇಸ್‌ಗೆ ಮತ್...

2020ರ ಫ್ರೂಟ್ ಇರ್ಫಾನ್ ಕೊ***ಲೆ ಕೇಸ್‌ಗೆ ಮತ್ತೆ ರಕ್ತದ ನೆರಳು?ಫ್ರೂಟ್ ಇರ್ಫಾನ್ ಕೊ***ಲೆ ಆರೋಪಿ ಮೇಲೆ ದಾಳಿ

E
By ETV 24X7 Chief Admin
October 7, 2026 297 views 0 comments Edit Article
2020ರ ಫ್ರೂಟ್ ಇರ್ಫಾನ್ ಕೊ***ಲೆ ಕೇಸ್‌ಗೆ ಮತ್ತೆ ರಕ್ತದ ನೆರಳು?ಫ್ರೂಟ್ ಇರ್ಫಾನ್ ಕೊ***ಲೆ ಆರೋಪಿ ಮೇಲೆ ದಾಳಿ

ಹುಬ್ಬಳ್ಳಿ: 2020ರಲ್ಲಿ ನಡೆದ ಕುಖ್ಯಾತ ರೌಡಿ ಶೀಟರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಫ್ರೂಟ್ ಇರ್ಫಾನ್ ಅಲಿಯಾಸ್ ಇರ್ಫಾನ್ ಹಂಚಿನಾಳ ಹತ್ಯೆ ಪ್ರಕರಣ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "2020ರ ಫ್ರೂಟ್ ಇರ್ಫಾನ್ ಕೊ***ಲೆ ಕೇಸ್‌ಗೆ ಮತ್ತೆ ರಕ್ತದ ನೆರಳು?ಫ್ರೂಟ್ ಇರ್ಫಾನ್ ಕೊ***ಲೆ ಆರೋಪಿ ಮೇಲೆ ದಾಳಿ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

2020ರ ಆಗಸ್ಟ್ 6ರಂದು ಹುಬ್ಬಳ್ಳಿಯ ಕಾರವಾರ ರಸ್ತೆಯ ಅಲ್-ತಾಜ್ ಹೋಟೆಲ್ ಬಳಿ ಫ್ರೂಟ್ ಇರ್ಫಾನ್ ಹತ್ಯೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬ ಎನ್ನಲಾಗಿರುವ ಹ್ಯಾರಿಸ್ ಪಠಾಣ್ ಮೇಲೆ ಇಂದು ಹಲ್ಲೆ ನಡೆದಿದೆ ಎನ್ನಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗೇರಿಯಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮವೊಂದರಲ್ಲಿ ಹ್ಯಾರಿಸ್ ಪಠಾಣ್ ಭಾಗವಹಿಸಿದ್ದ ವೇಳೆ ಏಕಾಏಕಿ ಕೆಲವರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಫ್ರೂಟ್ ಇರ್ಫಾನ್ ಪುತ್ರ ಅರ್ಬಾಜ್ ಸೇರಿದಂತೆ ಐವರು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಸದ್ಯ ಕೇಳಿಬರುತ್ತಿದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಘಟನೆಯಿಂದ ಮದುವೆ ಸಮಾರಂಭದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ. ಮಾಹಿತಿ ತಿಳಿದು ಕೇಶ್ವಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.