ರಾಜ್ಯದಲ್ಲಿಯೇ ಹುಬ್ಬಳ್ಳಿ-ಧಾರವಾಡದ ಗಣೇಶೋತ್ಸವ ಅತ್ಯಂತ ಉತ್ತಮ ಹಾಗೂ ಶಾಂತಿಯುತವಾಗಿ ನಡೆಯಬೇಕು. ಮೈಸೂರು ದಸರಾ ಮಾದರಿಯಲ್ಲೇ ಈ ಹಬ್ಬವೂ ವಿಶೇಷ ಪ್ರಾಮುಖ್ಯತೆ ಪಡೆದುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಅವಳಿನಗರದಲ್ಲಿ 950ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಬಿಗಿ ಭದ್ರತೆ ಗಣೇಶೋತ್ಸವದ ಸಂದರ್ಭದಲ್ಲಿ ವಾಚ್ ಟವರ್‌ಗಳನ್ನೂ ಬಳಸಿಕೊಂಡು ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗುವುದು.15 ಅಡಿಗಿಂತ ಹೆಚ್ಚಿನ ಎತ್ತರದ ಮೂರ್ತಿ ಇದ್ದರೆ ರೂಟ್ ಸರ್ವೆ ಮಾಡಿ ವಿದ್ಯುತ್ ತಂತಿ, ಮರಗಳ ಬಗ್ಗೆ ಮಾಹಿತಿ ನೀಡಬೇಕು.
ಪೆಂಡಾಲ್ ಹಾಕುವಾಗ ಆಂಬ್ಯುಲೆನ್ಸ್, ಅಗ್ನಿಶಾಮಕ ದಳದ ವಾಹನಗಳು ಹೋಗಲು ದಾರಿ ಬಿಡಬೇಕು, ಪೆಂಡಾಲ್‌ನಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಇನ್ನು ಡಿಜೆ ಸೌಂಡ್ 80 ಡೆಸಿಬಲ್‌ಗಿಂತ ಹೆಚ್ಚು ಹೋದರೆ ಪೊಲೀಸರ ಬಳಿ ಇರುವ ಆ್ಯಪ್ ಮೂಲಕ ಗೊತ್ತಾಗುತ್ತದೆ. ಕರ್ಕಶ ಶಬ್ದ ಇದ್ದರೆ ಡಿಜೆ ವಶಕ್ಕೆ, ₹5 ಲಕ್ಷ ದಂಡ ವಿಧಿಸಲಾಗುವುದು.
ಲೇಸರ್ ಲೈಟ್ ಹಾಕಬಾರದು, ಅದರಿಂದ ಕಣ್ಣಿಗೆ ತೊಂದರೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದರ ಜೊತೆಗೆ ನಗರದಲ್ಲಿ ಚಾಕು ಇರಿತ ಪ್ರಕರಣ ತಡೆಗೆ ಅವರು *ಆ್ಯಂಟಿ ಸ್ಟ್ಯಾಬಿಂಗ್ ಸ್ಕ್ವಾಡ್* ಕೂಡ ರಚಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು, ವಾಹನಗಳನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲನೆ ಮಾಡಲಾಗುತ್ತಿದೆ.