ರೈತ ಹೋರಾಟಗಾರ ಕೊಡಿಹಳ್ಳಿ ಚಂದ್ರಶೇಖರ್ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹುಬ್ಬಳ್ಳಿಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶ ಸಚಿನ್ ಕುಮಾರ್ ಶಿವಪೂಜೆ ಆದೇಶ ನೀಡಿದ್ದಾರೆ.
2013ರಲ್ಲಿ ಕಳಸಾ-ಬಂಡೂರಿ ಹೋರಾಟದ ವೇಳೆ ರೈಲು ತಡೆ ನಡೆಸಿದ ಪ್ರಕರಣದಲ್ಲಿ ಅವರು ಬಂಧನವಾಗಿದ್ದಾರೆ. ಜಾಮೀನು ಕೋರಿದ ಕೊಡಿಹಳ್ಳಿಗೆ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ.
2019ರಿಂದ ವಿಚಾರಣೆಗೆ ಹಾಜರಾಗಿಲ್ಲ, ಈಗ ಜಾಮೀನು ಕೊಟ್ಟರೆ ಮತ್ತೆ 5 ವರ್ಷ ಬರಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕಾನೂನಿಗೆ ಗೌರವ ನೀಡದವರು ಹೋರಾಟಗಾರರಲ್ಲ ಎಂದು ಹೇಳಿ ಜೈಲಿಗೆ ಕಳುಹಿಸಿದ್ದಾರೆ. ಬಳಿಕ ಮಾತನಾಡಿದ ಕೊಡಿಹಳ್ಳಿ, ಮಹದಾಯಿಗಾಗಿ ಹೋರಾಟ ಮಾಡಿದ್ದೇವೆ, ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.