Home / ಹುಬ್ಬಳ್ಳಿ-ಧಾರವಾಡ / ರೈತರಿಗೆ ನ್ಯಾಯ ಸಿಗುವವರೆಗೂ ನಾನು ಸಕ್ಕರೆ ತಿನ...

ರೈತರಿಗೆ ನ್ಯಾಯ ಸಿಗುವವರೆಗೂ ನಾನು ಸಕ್ಕರೆ ತಿನ್ನುವುದಿಲ್ಲ! ಸ್ವಾಮೀಜಿಯ ಖಡಕ ಘೋಷಣೆ. ಎಲ್ಲಾ ಮಠಾಧೀಶರು ಬೀದಿಗಿಳಿಯಬೇಕು

E
By ETV 24X7 Chief Admin
October 14, 2026 219 views 0 comments Edit Article
ರೈತರಿಗೆ ನ್ಯಾಯ ಸಿಗುವವರೆಗೂ ನಾನು ಸಕ್ಕರೆ ತಿನ್ನುವುದಿಲ್ಲ! ಸ್ವಾಮೀಜಿಯ ಖಡಕ ಘೋಷಣೆ. ಎಲ್ಲಾ ಮಠಾಧೀಶರು ಬೀದಿಗಿಳಿಯಬೇಕು

ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ರೈತ ಪರವಾಗಿ ದಿಂಗಾಲೇಶ್ವರ ಸ್ವಾಮಿಜಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಇದು ಅವರ ನೀತಿ ಮತ್ತು ಅನೀತಿಗೆ ಸಾಕ್ಷಿ. ನಾವು ತಿನ್ನುವ ಪ್ರತಿ ಅನ್ನದ ಅಗುಳಿನಲ್ಲೂ ರೈತನ ಬೆವರು ಇದೆ. ಬಿಸಿಲಿನಲ್ಲಿ, ರಸ್ತೆಯಲ್ಲಿ ಮಲಗಿರುವ ರೈತನನ್ನು ನೆನಪಿಸಿಕೊಳ್ಳಬೇಕು.

ನಾನು ಕರ್ನಾಟಕದ ಎಲ್ಲಾ ಮಠಾಧೀಶರಲ್ಲಿ ಕೈಮುಗಿದು ಮನವಿ ಮಾಡಿಕೊಳ್ಳುತ್ತೇನೆ. ಒಂದು ಜಾತಿ, ಒಂದು ಧರ್ಮವಲ್ಲ, ಎಲ್ಲಾ ಧರ್ಮದ ಮಠಾಧೀಶರು, ಸಾಹಿತಿಗಳು, ಸಿನಿಮಾ ಕಲಾವಿದರು ಎಲ್ಲರೂ ರೈತರ ಪರವಾಗಿ ಬೀದಿಗಿಳಿಯಬೇಕು. ಮಠವನ್ನು ಬಿಟ್ಟು ಹೊರಗೆ ಬರಬೇಕು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ರೈತರಿಗೆ ನ್ಯಾಯ ಸಿಗುವವರೆಗೂ ನಾನು ಸಕ್ಕರೆ ತಿನ್ನುವುದಿಲ್ಲ! ಸ್ವಾಮೀಜಿಯ ಖಡಕ ಘೋಷಣೆ. ಎಲ್ಲಾ ಮಠಾಧೀಶರು ಬೀದಿಗಿಳಿಯಬೇಕು"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಆಡಳಿತದಲ್ಲಿರುವ ಸಚಿವರು ರೈತರ ಬೆಳೆಯ ಬಗ್ಗೆ ಮಾತನಾಡದಿದ್ದರೆ, ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಹುಬ್ಬಳ್ಳಿಯ ನೆಲದಲ್ಲಿ ಕಾಲಿಡಲು ಸಾಧ್ಯವಾಗದಂತಹ ಪರಿಸ್ಥಿತಿ ಬರುತ್ತದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ರೈತರು ಈ ದೇಶದ ಮಾಲೀಕರು, ಮಂತ್ರಿಗಳು ಅವರ ಸೇವಕರು. ಮಾಲೀಕರ ಆಸೆಯನ್ನು ಈಡೇರಿಸುವುದು ಸೇವಕರ ಕರ್ತವ್ಯ.

*ಇಂದಿನಿಂದ ರೈತರಿಗೆ ನ್ಯಾಯ ಸಿಗುವವರೆಗೂ ನಾನು ಸಕ್ಕರೆಯನ್ನು ಮುಟ್ಟುವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ*" ಎಂದು ಅವರು ಘೋಷಿಸಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.