ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಿಂದ ಸಾರ್ವಜನಿಕರಿಗೆ ಮುಖ್ಯ ಎಚ್ಚರಿಕೆ ನೀಡಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಗಾಳಿಪಟ ಹಾರಿಸಲು ಬಳಸುವ ನಿಷೇಧಿತ ಮಾಂಜಾ ದಾರ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ದಿನಾಂಕ 11-07-2017 ರಂತೆ ನೈಲಾನ್, ಸಿಂಥೆಟಿಕ್ ದಾರ ಹಾಗೂ ಗಾಜು ಅಥವಾ ಲೋಹ ಲೇಪಿತ ಮಾಂಜಾ ದಾರವನ್ನು ಗಾಳಿಪಟ ಹಾರಿಸಲು ಬಳಸುವುದನ್ನು ನಿಷೇಧಿಸಲಾಗಿದೆ.
ಈ ಮಾಂಜಾ ದಾರ ಮನುಷ್ಯರು, ಮಕ್ಕಳು, ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಗಂಭೀರ ಗಾಯಗಳನ್ನು ಉಂಟುಮಾಡಬಹುದು. ದ್ವಿಚಕ್ರ ವಾಹನ ಸವಾರರ ಕುತ್ತಿಗೆಗೆ ಸಿಲುಕಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ, ಹಾಗೂ ಪಕ್ಷಿಗಳು ದಾರದಲ್ಲಿ ಸಿಲುಕಿ ಸಾವನ್ನಪ್ಪುತ್ತಿವೆ.ಆದ್ದರಿಂದ ನಿಷೇಧಿತ ಮಾಂಜಾ ದಾರ ತಯಾರಿಸಬೇಡಿ, ಮಾರಾಟ ಮಾಡಬೇಡಿ, ಖರೀದಿಸಬೇಡಿ ಮತ್ತು ಬಳಕೆ ಮಾಡಬೇಡಿ. ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಸಿಟಿ ಪೊಲೀಸರು ಎಚ್ಚರಿಸಿದ್ದಾರೆ. ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡಿ ಮಾಹಿತಿ ನೀಡಬೇಕಾಗಿ ವಿನಂತಿಸಿದ್ದಾರೆ