Home / ಕ್ರೈಂ / ಹುಬ್ಬಳ್ಳಿಯ ಹೊಸುರು KSRTC ಬಸ್ ನಿಲ್ದಾಣದಲ್ಲಿ...

ಹುಬ್ಬಳ್ಳಿಯ ಹೊಸುರು KSRTC ಬಸ್ ನಿಲ್ದಾಣದಲ್ಲಿ ಹೈಡ್ರಾಮಾ : ಯುವಕರ ಮೇಲೆ ಹಲ್ಲೆ ಆರೋಪ!

E
By ETV 24X7 Chief Admin
October 27, 2026 339 views 0 comments Edit Article
ಹುಬ್ಬಳ್ಳಿಯ ಹೊಸುರು KSRTC ಬಸ್ ನಿಲ್ದಾಣದಲ್ಲಿ ಹೈಡ್ರಾಮಾ : ಯುವಕರ ಮೇಲೆ ಹಲ್ಲೆ ಆರೋಪ!

ಹುಬ್ಬಳ್ಳಿ: ಬಸ್‌ಗಳ ಸಮಯ ಕೇಳಿದ್ದಕ್ಕೆ ಯುವಕರ ಮೇಲೆ ಹಲ್ಲೆ ನಡೆಸಿ, ಶರ್ಟ್ ಹರಿದು ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹುಬ್ಬಳ್ಳಿಯ ಹೊಸೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿ ಹೊಸುರು KSRTC ಬಸ್ ನಿಲ್ದಾಣದಲ್ಲಿ ಹೈಡ್ರಾಮಾ: ಯುವಕರ ಮೇಲೆ ಹಲ್ಲೆ ಆರೋಪ!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

‎
‎ಟಿಸಿ ಸಿಬ್ಬಂದಿ ಎಂದು ಯುವಕರು ಆರೋಪಿಸಿರುವ ಕೆಲವರು, ಬಸ್‌ಗಳ ಸಮಯ ಹಾಗೂ ಸ್ಥಳದ ಮಾಹಿತಿ ಕೇಳಿದ್ದಕ್ಕೆ ತಮ್ಮನ್ನು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ಇಬ್ಬರು ಯುವಕರು ಆರೋಪಿಸಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

‎ಅಷ್ಟೇ ಅಲ್ಲದೆ, ತಮ್ಮನ್ನು ನಿಯಂತ್ರಣ ಕೊಠಡಿಯಂತಿರುವ ಸ್ಥಳಕ್ಕೆ ಕರೆದೊಯ್ದು ಬೆದರಿಕೆ ಹಾಕಿದ್ದಾರೆ ಎಂದೂ ದೂರಿದ್ದಾರೆ. ಯುವಕರೊಬ್ಬರು ವಿಡಿಯೋದಲ್ಲಿ ತಮ್ಮ ಹರಿದ ಶರ್ಟ್ ಹಾಗೂ ಭುಜದ ಮೇಲಿನ ಗಾಯದ ಗುರುತನ್ನು ತೋರಿಸಿದ್ದಾರೆ.
‎ಆದರೆ, ಈ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕಿದೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.